ಕ್ಯಾಲಗಾನ್

ಸೋಡಿಯಂ ಹೆಕ್ಸಮೆಟಫಾಸ್ಫೇಟಿನ [(ಓಚಿPಔ3)6] ವಾಣಿಜ್ಯ ನಾಮ. ಬಣ್ಣವಿಲ್ಲದ, ವಾಸನೆಯಿಲ್ಲದ, ಪಾರದರ್ಶಕವಾಗಿರುವ, ತಟ್ಟೆಯ ರೂಪದ, ಹರಳುಗಳ ಅಥವಾ ಪುಡಿಯ ರೂಪದಲ್ಲಿ ಇರುವ ಸಂಯುಕ್ತ. ಇದರೊಂದಿಗೆ ಸ್ವಲ್ಪ ಟೆಟ್ರಸೋಡಿಯಂ ಪೈರೊಫಾಸ್ಫೇಟು (ಓಚಿP2ಔ7) ಸಹ ಇರುತ್ತದೆ. ನೀರಿನಲ್ಲಿ ಇದರ ಕರಗುವಿಕೆ ಬಲು ನಿಧಾನ. ಜೈವಿಕ ದ್ರಾವಣಗಳಲ್ಲಿ ಕರಗುವುದಿಲ್ಲ. ಅತಿ ಬೆವರಿಕೆಯನ್ನು ಮತ್ತು ಬೆವರಿನ ವಾಸನೆಯನ್ನು ತಡೆಯಲು ಮತ್ತು ಬೆರಳುಗಳ ಮಧ್ಯೆ ಅತಿ ಬೆವರು ಬಂದು ಒತ್ತಿಕೊಂದು ಹುಣ್ಣು ಆಗದಂತೆ ಮಾಡಲು ಇದರ 5% ಪುಡಿಯನ್ನು ರಕ್ಷಕ ದೂಳಾಗಿ ಬಳಸುತ್ತಾರೆ. ಬಾಯ್ಲರಿಗೆ ಹಾಕುವ ನೀರನ್ನು ಶುದ್ಧ ಮಾಡಲು, ನೀರಿನ ಗಡಸುತನವನ್ನು ಕಡಿಮೆ ಮಾಡಲು ಇದರ ವಿವಿಧ ಸಾರಗಳ ದ್ರಾವಣಗಳನ್ನು ಉಪಯೋಗಿಸುತ್ತಾರೆ. ಕ್ಯಾಲ್ಗಾನಿಗೆ ವೈದ್ಯಕೀಯ ಉಪಯೋಗವೂ ಉಂಟು. ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ವಿಷಕ್ರಿಮಿಗಳಿಲ್ಲದಂತೆ ಮಾಡುವಾಗ ಕುದಿಯುವ ನೀರಿಗೆ ಇದನ್ನು ಹಾಕುವುದರಿಂದ ಉಪಕರಣಗಳ ಮೇಲೆ ತುಕ್ಕು ಹಿಡಿಯುವುದೂ ಬೂದಿ ಕೂಡುವುದೂ ಕಡಿಮೆಯಾಗುತ್ತದೆ.	(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ